ಇಬ್ಬರೂ ಕೂಡಿ ಗೃಹ ಸಾಲ ಪಡೆದರೆ ಅಧಿಕ ಲಾಭ !!

ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಮನೆಯನ್ನು ಕಟ್ಟಬೇಕು ಎಂಬ ಕನಸು ಇದ್ದೆ ಇರುತ್ತದೆ . ತಾನು ದುಡಿದ ಹಣವನ್ನು ಯಾವುದಾದರೂ insurance , share market , mutual fund , FD ಹೀಗೆ ನಾನಾ ಕಡೆಗಳಲ್ಲಿ ಹಣವನ್ನು ಕೂಡಿಟ್ಟು ಮನೆಯ ಕನಸನ್ನು ನನಸು ಮಾಡಿಕೊಳ್ಳುವ ಬಯಕೆ ಇದ್ದರೂ, ಈಗಿನ ಇಟ್ಟಿಗೆ ಮರಳು ಸಿಮೆಂಟ್ ಕಲ್ಲು ಕಬ್ಬಿನ ಎಂದು ಮನೆಗೆ ಹಾಕುವ ಹಣ ನಾವು ಕೂಡಿಟ್ಟ ಹಣಕ್ಕೂ ಮೂರು ಪಟ್ಟು ಜಾಸ್ತಿ ಆಗುತ್ತದೆ . ಯಾರೇ ಆಗಲಿ ಸಾಲ ಮಾಡಿ ಮನೆ ಕಟ್ಟಿದರೆ ಸಾಲದ ಮೊತ್ತ ಕ್ಕೂ ಹೆಚ್ಚು ಅದರ ಬಡ್ಡಿ ದರವು ಹೆಚ್ಚಾಗುತ್ತದೆ ಎಂದು ಸಾಲ ಪಡೆಯಲು ಭಯ ಪಡುತ್ತಾರೆ .
ಈಗಿನ ಕಾಲದಲ್ಲಿ ಮನೆಯಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ಇಲ್ಲದೆ ಕುಟುಂಬಕ್ಕೆ ಎಂದು ದುಡಿಯುತ್ತಾರೆ. ಕೆಲಸ ಮಾಡುವ ಪ್ರತಿ ಕಂಪನಿಗಳು ಇಲಾಖೆಗಳು ನೌಕರಿಗಾಗಿ ಹಲವಾರು ನೀಡುತ್ತದೆ .

ಈಗ ಸಾಫ್ಟ್ವೇರ್ ಕಂಪನಿ ಗಳು ಮಲ್ಟಿನ್ಯಾಷನಲ್ ಕಂಪನಿ ಗಳು ದೇಶದ ಉದ್ದಗಲಕ್ಕೂ ಇವೆ. ಎಲ್ಲರೂ ಯಾವ ಕಂಪನಿ ಗಳಲ್ಲಿ ಹೆಚ್ಚು ಫೆಸಿಲಿಟಿ ಇದೆ ಎಂದು ನೋಡಿ ಉದ್ಯೋಗಕ್ಕೆ ಸೇರುವ ಮಂದಿ ಹೆಚ್ಚು . ಅದಕ್ಕೆ ತಕ್ಕಂತೆ ಕಂಪನಿ ಗಳು ಸಹ ಹೊಸ ಹೊಸ ಯೋಜನೆಗಳನ್ನು ಕೆಲಸಗಾರರ ಮುಂದೆ ಇಡುತ್ತಿವೆ .
ಗಂಡ – ಹೆಂಡತಿ ಇಬ್ಬರೂ ದುಡಿಯುವುದರಿಂದ ಮನೆಯ ಖರ್ಚು ಮಾತ್ರ ಅಲ್ಲದೆ ಸಾಲ ಪಡೆಯಲು ಬಹಳ ಅನುಕೂಲ ಇದೆ. ಇಬ್ಬರು ಬೇರೆ ಬೇರೆಯಾಗಿ ಒಟ್ಟಿಗೆ ಹೆಚ್ಚಿನ ಮೊತ್ತದ ಸಾಲವನ್ನು ಪಡೆಯಬಹುದು. ಹಾಗೆಯೇ ಒಬ್ಬರು ಸಾಲಕ್ಕೆ ಅರ್ಜಿ ಹಾಕಿ ತಿಂಗಳುಗಳ ಕಾಲ ಕಾಯುವ ಸ್ಥಿತಿ ಇರುವುದಿಲ್ಲ. ಯಾರಿಗಾದರೂ ಒಬ್ಬರಿಗೆ ಬೇಗ ಸಾಲ ಸಿಕ್ಕಿದರೂ ಅದು ಪ್ರಯೋಜನವೇ ಆಗುತ್ತದೆ. ನಿಮ್ಮ ಬಳಿ ಒಳ್ಳೆಯ ಕ್ರೆಡಿಟ್ ಸ್ಕೋರ್ ಇದ್ದರೆ ನಿಮಗೆ ಬಹುಬೇಗ ಸಾಲವು ಸಿಗುತ್ತದೆ .
ಇದರಿಂದ ಇನ್ನೊಂದು ಬಹಳ ದೊಡ್ಡ ಉಪಯೋಗ ಇದೆ ಏನೆಂದರೆ ಸೆಕ್ಷನ್ 24 ಹಾಗೂ 30c ಅಡಿಯಲ್ಲಿ ಜಂಟಿಯಾಗಿ ಸಾಲವನ್ನು ಪಡೆದರೆ ನಿಮಗೆ ಟ್ಯಾಕ್ಸ್ ಮೊತ್ತ ಕಡಿಮೆ ಆಗುತ್ತದೆ. ಹಾಗೆಯೇ ನಿಮ್ಮ ಮನೆಯ ಮಹಿಳೆ ಪಡೆಯುವ ಸಾಲಕ್ಕೆ ಕಡಿಮೆ ಬಡ್ಡಿ ದರವು ಇರುತ್ತದೆ. ಹೆಚ್ಚಿಗೆ ಸಾಲವು ಆದರೂ ಬಡ್ಡಿದರ ಕಡಿಮೆ ಆದಂತೆ ಆಗುತ್ತದೆ.
ಆದರೆ ಜಂಟಿ ಸಾಲ ಪಡೆಯುವ ಮುನ್ನ ನಾವು ಕೆಲವೊಂದಿಷ್ಟು ವಿಚಾರವನ್ನು ತಿಳಿದುಕೊಳ್ಳಬೇಕು. ಮೊದಲನೆಯದಾಗಿ ಇಬ್ಬರ ಕ್ರೆಡಿಟ್ ಸ್ಕೋರ್ ವಿವರ . ಇಬ್ಬರಲ್ಲಿ ಒಬ್ಬರು ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಸಾಲ ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗೆಯೇ ಇನ್ನೊಂದು ಮುಖ್ಯ ಅಂಶ ಏನೆಂದರೆ ಇಬ್ಬರು ಸಾಲ ಪಡೆದರೆ ನಿಮ್ಮ ಮನೆಯ ತಿಂಗಳ ಖರ್ಚು ಸರಿದೂಗಿಸಲು ಆಗುತ್ತದೆ ಅಥವಾ ಇಲ್ಲ ಎಂಬುದು . ಅದರ ಜೊತೆ ಏನಾದರೂ ಹಣದ ತೊಂದರೆ ಬಂದರೆ ಇಬ್ಬರು ಸಾಲ ಪಡೆದು ನಿಮಗೆ ದಿನನಿತ್ಯ ಜೀವನಕ್ಕೆ ತೊಂದರೆ ಆಗಬಹುದು.
ಜಂಟಿ ಗೃಹಸಾಲವು ಒಂದು ಬಗೆಯಲ್ಲಿ ಬಹಳ ಉಪಯೋಗ ಆದರೆ ನಿಮ್ಮ ಸಂಬಳ ಹಾಗೂ ನೀವು ಏಷ್ಟು ಸಾಲ ಮಾಡುತ್ತೀರಿ ಎಂಬುದು ಇಲ್ಲಿ ಗಮನಾರ್ಹ ಅಂಶ.

Leave a comment