ಇಸ್ರೇಲ್ ಹಮಾಸ್ ಯುದ್ಧದಿಂದ ಜಗತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ – ನಿರ್ಮಲಾ ಸೀತಾರಾಮನ್!

ಮೊರಾಕೊದ ಮರ್ರಾಕೇಶ್‌ನಲ್ಲಿ ಐಎಂಎಫ್-ವಿಶ್ವಬ್ಯಾಂಕ್ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ರಷ್ಯಾ ಯುಕ್ರೇನ್ ಯುದ್ಧದಿಂದ ಜಗತ್ತು ಆರ್ಥಿಕವಾಗಿ ಹಿಂದುಳಿಯುತ್ತಾ ಇತ್ತು. ಈಗ ಮತ್ತೆ ಇಸ್ರೇಲ್ ಹಮಾಸ್ ಯುದ್ಧದಿಂದ ಆರ್ಥಿಕವಾಗಿ ಕಷ್ಟವಾಗಲಿದೆ ಎಂದು ಹೇಳಿದರು. ರಷ್ಯಾ ಯುಕ್ರೇನ್ ಯುದ್ಧದಿಂದ ಬಹಳ ದೇಶಗಳು ಹಣಕಾಸಿನ ಸಂಕಷ್ಟ ಎದುರಿಸುತ್ತಿವೆ. ದಿನ ದಿನಕ್ಕೂ ಆಹಾರ ಬೆಳೆಗಳು ಗಗನಕ್ಕೆ ಏರುತ್ತಾ ಇರುವ ಸ್ಥಿತಿಯಲ್ಲಿ ಮತ್ತೆ ಯುದ್ಧ ಭೀತಿ ಎದುರಾಗಿದೆ ಇದರಿಂದ ಜನಸಾಮಾನ್ಯರಿಂದ ಹಿಡಿದು ಉದ್ಯಮ ವಲಯ ದೇಶದ ಹಣಕಾಸಿನ ವಿಚಾರದಲ್ಲಿ ಬಹಳ ಪರಿಣಾಮ ಆಗಲಿದೆ. ಸಣ್ಣ ಪುಟ್ಟ ಉದ್ಯಮ ವಲಯ ಹಾಗೂ ಬಡವರಿಗೆ ಇದು ಸಂಕಷ್ಟ ವಾಗಲಿದೆ. ಹಲವಾರು ಸಣ್ಣ ಪುಟ್ಟ ದೇಶಗಳಿಗೆ ಇದು ಬಹುದೊಡ್ಡ ಪರಿಣಾಮ ಆಗುತ್ತದೆ. ಹೀಗೆ ಯುದ್ಧ ಮುಂದುವರೆದರೆ ಜಗತ್ತು ಆರ್ಥಿಕ ಭೀತಿ ಅನುಭವಿಸಬೇಕಾಗುತ್ತದೆ ಎಂದು ವಿವಿಧ ದೇಶಗಳ ಮಂತ್ರಿಗಳು ಹಾಗೂ ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಸಂಭೆಯಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದರು.

ಭಾರತದ ಬಗ್ಗೆ ಮಾತಾಡಿದ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ನಾವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಇದರಿಂದ ಆಗಸ್ಟ್ ನಲ್ಲಿ 6.83 ಇದ್ದ ಹಣದುಬ್ಬರದ ದರವು ಈಗ 5.02 ಗೆ ಇಳಿದಿದೆ. ಇನ್ನು ಹೀಗೆ ಮುಂದು ಬರೆದರೆ ಹಣದುಬ್ಬರ ದರವು ಇನ್ನಷ್ಟು ಹೆಚ್ಚಾಗಬಹುದು. ದೇಶ ದೇಶದ ನಡುವಿನ ಯುದ್ಧದಿಂದ ಆರ್ಥಿಕವಾಗಿ ಸಂಕಷ್ಟಗಳು ಎದುರಾಗುತ್ತವೆ . ಇದಕ್ಕೆ ನಾವು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತ ಇದ್ದೇವೆ . ಆಹಾರ ಉತ್ಪನ್ನಳ ಹಣದುಬ್ಬರ ಕಡಿಮೆ ಮಾಡಲು ಭಾರತ ಸರ್ಕಾರ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತದೆ . ಇದರಿಂದ ಮುಂಬರುವ ದಿನಗಳಲ್ಲಿ ಭಾರತವು ದಿನ ಉಪಯೋಗಿ ಆಹಾರ ವಸ್ತುಗಳ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

Leave a comment