ಏರಿಕೆ ಕಂಡ ಷೇರು ಮಾರುಕಟ್ಟೆ ! ಸಂತಸದಲ್ಲಿ ಹೂಡಿಕೆದಾರರು!

ಇಂದಿನ ದಿನಮಾನದಲ್ಲಿ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವವರ ಸಂಖ್ಯೆ ಅಧಿಕವಾಗಿದೆ. ಒಂದು ರೂಪಾಯಿ ಹಾಕಿ 10 ರೂಪಾಯಿ ವಾಪಸು ಪಡೆಯಬಹುದು ಎಂಬ ಆಸೆಯಲ್ಲಿ ಏಷ್ಟೋ ಜನರು ತಮ್ಮ ಹಣವನ್ನು ದಿನನಿತ್ಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ಹಣವನ್ನು ಕಳೆದುಕೊಂಡರು ಜನರಿಗೆ ಷೇರು ಮಾರುಕಟ್ಟೆ ವ್ಯಾಮೋಹ ಕಡಿಮೆ ಆಗುವುದಿಲ್ಲ. ಲಕ್ಷ ಲಕ್ಷ ಹೂಡಿಕೆ ಮಾಡಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದರು ಮರುದಿನ ಕಳೆದುಕೊಂಡ ಹಣವನ್ನು ಅದರ ಎರಡೂ ಪಟ್ಟು ವಾಪಸು ಪಡೆಯುವ ಜನರು ಇದ್ದಾರೆ.
ಷೇರು ಮಾರುಕಟ್ಟೆಯ ಬೆಲೆ ಪ್ರತಿ ದಿನವೂ ಗಣನೀಯ ವ್ಯತ್ಯಾಸ ಆಗುತ್ತದೆ . ಇಂದು ಬೆಳಗ್ಗೆ ಒಂದು ದರ ಇದ್ದರೆ ಸಂಜೆ ಹೊತ್ತಿಗೆ ಇನ್ನೊಂದು ದರ ಇರುತ್ತದೆ . ಯಾವ ಕ್ಷಣದಲ್ಲಿ ಯಾರ ಲಕ್ ಖುಲಾಯಿಸುತ್ತದೇ ಎಂಬುದು ಗೊತ್ತೇ ಆಗುವುದಿಲ್ಲ.
ಷೇರು ದರ ಯುದ್ಧ ಸಮಯದಲ್ಲಿ ಅಥವಾ ಯಾವುದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ದರ ವ್ಯತ್ಯಾಸ ಆದಾಗ ಷೇರು ದರವು ವ್ಯತ್ಯಾಸ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಈ ಸಮಯದಲ್ಲಿಯೇ ಏಷ್ಟೋ ಜನರು ತಮ್ಮ ಹಣವನ್ನು ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚು . ಪ್ರತಿ ಗಂಟೆಗೆ ಒಮ್ಮೆ ವ್ಯತ್ಯಾಸ ಕಾಣುವ ಷೇರು ಮಾರುಕಟ್ಟೆಯ ದರವನ್ನು ವೀಕ್ಷಿಸುವ ಒಂದು ದೊಡ್ಡ ಬಳಗವೇ ಭಾರತದಲ್ಲಿ ಇದೆ. ಹಲವಾರು ಅಂತಾರಾಷ್ಟ್ರೀಯ ಬ್ಯಾಂಕ್ ಗಳು ದೊಡ್ಡ ದೊಡ್ಡ ಉದ್ಯಮಿಗಳು ಶೇರು ಮಾರುಕಟ್ಟೆ ಗೆ ಪಾಯಿಂಟ್ಸ್ ನೀಡುತ್ತಾರೆ. ಏಷ್ಟೋ ಬ್ಯಾಂಕ್ ಗಳು ತಾವು ಷೇರು ಖರಿದಿಗೆ ಹಾತೊರೆಯುತ್ತಾರೆ.
ಈಗ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ಯುದ್ಧದ ಪರಿಣಾಮವಾಗಿ ಷೇರು ಮಾರುಕಟ್ಟೆ ಬಹಳ ಕುಸಿತ ಕಂಡಿತ್ತು. ಎಲ್ಲಾ ಹೂಡಿಕೆದಾರರು ಕೈ ಕಟ್ಟಿ ಕುಳಿತ ಸಮಯದಲ್ಲಿ ಶುಭ ಸುದ್ದಿ ಒಂದು ಬಂದಿದೆ.
ವಿವಿಧ ಬ್ಯಾಂಕ್ ಗಳ ಲಾಭಗಳು ಶೇರು ಮಾರುಕಟ್ಟೆಯ ದರ ಏರಲು ಕಾರಣವಾಗುತ್ತವೆ . ಹಾಗೆಯೇ ಈಗ ಒಂದು ಶುಭ ಸಂಕೇತ ಸಿಕ್ಕಿದೆ. HDFC Bank ಅತ್ಯಧಿಕ ಲಾಭ ಹೊಂದಿರುವ ಕಾರಣ ಷೇರು ಮಾರುಕಟ್ಟೆಯ ದರ ಇನ್ನಷ್ಟು ಹೆಚ್ಚಳವಾಗಿದೆ. 3 ತಿಂಗಳ ಲಾಭ 51% ಹೆಚ್ಚಾಗಿ ಇರುವ ಕಾರಣ ಈ ವಾರದ ಶೇರು ಮಾರುಕಟ್ಟೆಯಲ್ಲಿ ಗಣನೀಯ ವ್ಯತ್ಯಾಸ ಕಂಡು ಬಂದಿದೆ.
ಇದರಿಂದ ಹಲವಾರು brokerage company ಗಳು ಶೇರು ತೆಗೆದುಕೊಳ್ಳಲು ಮುಂದೆ ಬಂದಿವೆ. ಬ್ಯಾಂಕ್ ಗಳ ಲಾಭ ಸೆನ್ಸಸ್ ಪಾಂಟ್ಸ್ ಜಾಸ್ತಿ ಆಗಿರುವುದು ಇದಕ್ಕೆ ಕಾರಣವಾಗಿದೆ.
ಬ್ಯಾಂಕ್ ಗಳು ನೀಡುವ ಸೆನ್ಸಸ್ ಪಾಯಿಂಟ್ಸ್ ಗಳಿಂದ ಹಲವಾರು ಶೇರು ಹೂಡಿಕೆದಾರರು ನಿಟ್ಟುಸಿರು ಬಿಡುವಂತೆ ಆಗಿದೆ.

Leave a comment