ಒಂದು ರೂಪಾಯಿ ಬಸ್ ದರ , ಇದು ಹಬ್ಬದ ಉಡುಗೊರೆ

ಹಬ್ಬದ ಸೀಸನ್ ಬಂತೆಂದರೆ ಎಲ್ಲಾ ಬಸ್ ಗಳು ದರ ಹೆಚ್ಚಿಗೆ ಮಾಡಿ ಸಿಟಿ ಗಳಿಂದ ತಮ್ಮ ತಮ್ಮ ಊರಿಗೆ ಹೋಗುವವರಿಗೆ ತಲೆ ಬಿಸಿ ತಂದು ಇಡುವ ಕಾಲ ಇತ್ತು. ಊರಿಗೆ ಹೋಗ ಬೇಕು ಎಂದರೆ ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಜಾಸ್ತಿ ಹಣ ಕೊಟ್ಟು ಹೋಗುವ ಸ್ಥಿತಿ ಎದುರಾಗಿತ್ತು . ಈಗ ಕರ್ನಾಟಕ ಸರಕಾರ ಮಹಿಳೆಯರಿಗೆ ಫ್ರೀ ಬಸ್ ಯೋಜನೆ ತಂದಿರುವುದರಿಂದ ಎಲ್ಲಾ ಪ್ರೈವೇಟ್ ಬಸ್ ಗಳು ಡಿಸ್ಕೌಂಟ್ ಕೊಟ್ಟು ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಾ ಇವೆ. ರೈಲು ವಿಮಾನ ಹಾಗೂ ಬಸ್ ಗಳು ಒಂದಾದ ಮೇಲೆ ಒಂದರಂತೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲಿವೆ . ಇದರಿಂದ ಹಬ್ಬದ ಸಂಭ್ರಮಕ್ಕೆ ಊರಿಗೆ ಹೋಗಲು ಬಸ್ ದರ ಹೆಚ್ಚು ಎಂದು ಮನಸ್ಸಿಲ್ಲದ ಮನಸ್ಸಿನಲ್ಲಿ ಬೆಂಗಳೂರಿನಂತಹ ಸಿಟಿ ಯಲ್ಲಿ p.g. room ಎಂದು ಒಬ್ಬರೇ ಇರುವುದು ತಪ್ಪಿದೆ.
ನಾಡಿನ ಅತಿ ದೊಡ್ಡ ಹಬ್ಬ ನವರಾತ್ರಿ . ಇದು ಇಡೀ ಕರ್ನಾಟಕದ ಆದ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ . ಹೆಚ್ಚಿನ ವಿದ್ಯಾಭ್ಯಾಸ ಅಥವಾ ಕೆಲಸದ ಸಲುವಾಗಿ ಮನೆಯಿಂದ ದೂರ ಇರುವವರಿಗೆ ಸಾವಿರಾರು ಹಣವನ್ನು ಒಂದು ದಿನಕ್ಕೆ ಖರ್ಚು ಮಾಡಲು ಇಷ್ಟ ಪಡದೆ ಬೇಸರದಿಂದ ಇರುವ ಜನರಿಗೆ ಇದು ಒಂದು ರೀತಿಯ ಸಿಹಿ ಸುದ್ದಿ.
ಬರೀ ಡಿಸ್ಕೌಂಟ್ ಅಷ್ಟೇ ಅಲ್ಲ ಅಭಿ ಬಸ್ ಬುಕಿಂಗ್ ಆಫ್ ಸ್ವಲ್ಪ ಮುಂದೆ ಯೋಚಿಸಿ ನೀವು ಯಾವುದೇ ಸ್ಥಳದಿಂದ ಎಲ್ಲಿಗೆ ಹೋಗಬೇಕು ಎಂದರೂ ಕೇವಲ ಒಂದು ರೂಪಾಯಿ ಟಿಕೆಟ್ ದರವನ್ನು ನಿಗದಿ ಪಡಿಸಿದೆ. ಇದು ಒಂದು ಪ್ರೈವೇಟ್ ಬುಕಿಂಗ್ app ಆಗಿದ್ದು ಇದರಲ್ಲಿ ನೀವು ಶ್ರೀ ಕುಮಾರ್, VRL ಅಂತಹ ಪ್ರೈವೇಟ್ ಸ್ಲೆಪ್ಪರ್ ಬಸ್ ಗಳನ್ನು ಬುಕ್ ಮಾಡಬಹುದು.
ಕರ್ನಾಟಕ ರಾಜ್ಯ ಸರಕಾರ ರಸ್ತೆ ಸಾರಿಗೆ ಸಂಸ್ಥೆ ( KSRTC ) ಸಹ ನವರಾತ್ರಿ ಹಬ್ಬದ ಸಮಯದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅಕ್ಟೋಬರ್ 15 ರಿಂದ ಅಕ್ಟೋಬರ್ 25 ರ ವರೆಗೂ ಇಡೀ ರಾಜ್ಯದ ದೇವಿ ದೇವಸ್ಥಾನಗಳ ದರ್ಶನಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಮಂಗಳೂರು, ಕೊಲ್ಲೂರು, ಮಡಿಕೇರಿ ದೇವಿ ದೇವಸ್ಥಾನಗಳ ದರ್ಶನಕ್ಕೆ ವಿಶೇಷ ಪ್ಯಾಕೆಜ್ ನೀಡಿದೆ. ಈ ಬಸ್ ನಲ್ಲಿ ಪಂಚ ದೇವಿಯರ ದರ್ಶನಕ್ಕೆ ಒಂದೇ ಬಸ್ ನಲ್ಲಿ ಹೋಗಿ ಬರುವ ವ್ಯವಸ್ಥೆ ಇದೆ.
ಆಂಧ್ರ ಸರ್ಕಾರ ಸಾರಿಗೆ ಸಂಸ್ಥೆಯು ವಿಶೇಷವಾಗಿ 5,500 ಬಸ್ ಗಳನ್ನೂ ಹಬ್ಬದ ಪ್ರಯುಕ್ತ ಬಿಡುವ ಯೋಚನೆ ಮಾಡಿದೆ.
ಇನ್ನು ರೈಲ್ವೆ ಇಲಾಖೆಯು ವಿಶೇಷವಾಗಿ 30 ಕ್ಕೂ ಹೆಚ್ಚು ರೈಲ್ ಗಳನ್ನು ದೇಶದಾದ್ಯಂತ ನವೆಂಬರ್ ತಿಂಗಳ ವರೆಗೂ ಮೀಸಲು ಇಟ್ಟಿದೆ.
ಹಾಗೆಯೇ ಹಬ್ಬದ ಪ್ರಯುಕ್ತ ವಿದೇಶದಿಂದ ಬರುವ ಭಾರತದ ಪ್ರಜೆಗಳಿಗೆ ಎಂದೇ ಎರ್ ಇಂಡಿಯಾ ವಿಶೇಷ ಪ್ಯಾಕೆಜ್ ನೀಡುವುದಾಗಿ ಹೇಳಿದೆ. ಹಾಗೆಯೇ ದೇಶದಿಂದ ವಿದೇಶಗಳಿಗೆ ಟ್ರಿಪ್ ಹೋಗುವವರಿಗೆ ಟಿಕೆಟ್ ಬೆಲೆಯನ್ನು ಅರ್ಧಕ್ಕೂ ಕಡಿಮೆ ಮಾಡಿದೆ.

Leave a comment