ಡೆಬಿಟ್ ಕಾರ್ಡ್ ಗಿಂತ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚುತ್ತಿದೆ !! Credit card usage is increasing over debit card!!

ಇವತ್ತಿನ ದಿನದಲ್ಲಿ ಹತ್ತು ರೂಪಾಯಿ ಇಂದ ಹಿಡಿದು ಲಕ್ಷದವರೆಗೆ ನೋಟು ಚಲಾವಣೆ ಇಲ್ಲ. ಮೊಬೈಲ್ ನಲ್ಲಿ ಇರುವ Paytm ಅಂತಹ ಅಪ್ಲಿಕೇಶನ್ ಅಥವಾ ಸ್ಮಾರ್ಟ್ ಕಾರ್ಡ್ ಗಳದ್ದೇ ಕಾರುಬಾರು. ಯಾವ ಅಂಗಡಿ ಅಥವಾ ಯಾವುದೇ ದೊಡ್ಡ ದೊಡ್ಡ ಶೋ ರೂಂ ಗಳಲ್ಲಿ ಚಿಲ್ಲರೆ ಅಥವಾ ನೋಟಿನ ವಹಿವಾಟು ಇಲ್ಲವೇ ಇಲ್ಲ.

ಎಲ್ಲರೂ ತಮ್ಮ ಬಳಿ ಇರುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಅಥವಾ ಮೊಬೈಲ್ ನಲ್ಲಿ ಇರುವ ಯುಪಿಐ ನಿಂದ ಹಣವನ್ನು ನೀಡುತ್ತಾರೆ. ಎಲ್ಲರೂ ಯಾವ ಅಪ್ಲಿಕೇಶನ್ ಇಂದ ಅಥವಾ ಯಾವುದರಿಂದ ರಿವಾರ್ಡ್ ಸಿಗುತ್ತದೆ ಅಥವಾ ಕ್ಯಾಶ್ ಬ್ಯಾಕ್ ಸಿಗುತ್ತದೆ ಎಂದೇ ಯೋಚಿಸುತ್ತಾರೆ.ಇಂದಿನ ದಿನಮಾನದಲ್ಲಿ ಲಾಭವನ್ನು ನಿರೀಕ್ಷೆ ಮಾಡುವವರಿಗೆ ಕ್ರೆಡಿಟ್ ಕಾರ್ಡ್ ಬಹಳ ಉಪಯುಕ್ತ. ಇದರಲ್ಲಿ ಆನ್ಲೈನ್ ಪೇಮೆಂಟ್ ಗಳಿಗೆ ಹೋಲಿಸಿದರೆ ಬಹಳ ಹೆಚ್ಚಿನ ರಿವಾರ್ಡ್(Rewrard) ಮತ್ತು ಆಫರ್ ಗಳು ಇವೆ.

ನೀವು ಖರೀದಿಸಿದ ವಸ್ತುಗಳಿಗೆ ನೀವು ರಿವಾರ್ಡ್ ಪಾಯಿಂಟ್ಸ್ ಬಳಸಿ ಹಣ ಪಾವತಿ ಮಾಡಬಹುದು . ಅಷ್ಟೇ ಅಲ್ಲ ಹೆಚ್ಚಿನ ಮೊಬೈಲ್ ಫ್ರಿಜ್ ಅಂತಹ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಾಗ ನಿಮಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಬೆಲೆ ಕಡಿತ ಆಗುತ್ತದೆ.ನೀವು ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚಿನ ಪಾಯಿಂಟ್ಸ್ ಪಡೆದರೆ ನಿಮಗೆ ಸಾಲ ಪಡೆಯಲು ಅನುಕೂಲ ಆಗುತ್ತದೆ.ನೀವು ಡೆಬಿಟ್ ಕಾರ್ಡ್ ಅಥವಾ ಯೂಪಿಐ ಬಳಸುವಾಗ ನೀವು ಒಮ್ಮೆ 50,000 ದ ವರೆಗೆ ಮಾತ್ರ ಹಣ ಪಾವತಿಸಲು ಸಾಧ್ಯ ಆದರೆ ಕ್ರೆಡಿಟ್ ಕಾರ್ಡ್ ನಲ್ಲಿ ಲಕ್ಷಕ್ಕೂ ಹೆಚ್ಚು ಒಮ್ಮೆಲೆ ಹಣ ಪಾವತಿ ಮಾಡಬಹುದು.

ಇದು ಡೆಬಿಟ್ ಕಾರ್ಡ್ ಗಿಂತ ಬಹಳ ಸೇಫ್ಟಿ ಸೌಲಭ್ಯವನ್ನು ಹೊಂದಿದೆ .ಇದರಿಂದ ಯಾವುದೇ ಭಯ ಇಲ್ಲದೆ ನೀವು ಈ ಕಾರ್ಡ್ ಬಳಸಬಹುದು.ನೀವು ಕ್ರೆಡಿಟ್ ಕಾರ್ಡ್ ಬಳಸುವುದರಿಂದ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಲ್ಲದೆ ಇದ್ದರೂ ನಿಮ್ಮ ಸ್ಕೋರ್ ಪಾಯಿಂಟ್ಸ್ ಆಧಾರದ ಮೇಲೆ ನೀವು ಅಕೌಂಟ್ ನಲ್ಲಿ ಇರುವ ಹಣಕ್ಕೂ ಮೀರಿ ನೀವು ಹಣ ಪಾವತಿ ಮಾಡಬಹುದು. ಇದರಿಂದ ನಿಮಗೆ ಸಾಲ ಮಾಡುವ ಸಂದರ್ಭ ಬರುವುದಿಲ್ಲ.

Leave a comment